Posts

Showing posts from May, 2018

ಜಡಭರತ

ನನ್ನ ಹೆಸರು ಜಡಭರತ ಎನ್ನ ಕನಸೇ ಭವ್ಯ ಭಾರತ ಕಾಳಸರ್ಪದ ಮೈಯಂತ ರಸ್ತೆ ಬೇಕು ಬದುಕು ಕಟ್ಟುವ ಉದ್ಯೋಗ ಬೇಕು ಭ್ರಷ್ಟರಿಗೆ ಜೈಲೇ ಗತಿಯಾಗಬೇಕು ಮಂಗಳನಾಚೆಗೆ ಹಾರಬೇಕು ವೈರಿಗಳು ಮಣ್ಣು ಮುಕ್ಕಬೇಕು ಉಗ್ರರ ಹತ್ತಿಕ್ಕಬೇಕು ಆಷಾಢಭೂತಿತನ ಬಯಲಿಗೆಳಿಬೇಕು ಓಲೈಕೆಯ ರಾಜಕಾರಣ ನಿಲ್ಲಬೇಕು ಏನೇ ಆದರೂ ಮಂದಿರವಲ್ಲೇ ಆಗಬೇಕು.. ಯಾರೋ ಪ್ರಧಾನ ಸೇವಕನಂತೆ ಎಪ್ಪತ್ತರ ಮುದಕನಂತೆ ಕಾಯಕವೇ ಕೈಲಾಸವಂತೆ ದಿನಕಿಪ್ಪತ್ತು ಗಂಟೆ ಕೆಲಸವಂತೆ ಹುಚ್ಚನಂತೆ.. ನಾನೋ ಮಹಾ ಬುದ್ಧಿವಂತ ಐದು ದಿನ ದುಡಿವೆ ಗಾಣದೆತ್ತಂತೆ ಕೊನೆಯರಡು ದಿನ ಮಂಚದ ಮಂಜುನಾಥ ಟೀವಿಯ ಮುಂದೆಯೇ ಠೀವಿ ಮಲಗಿದರೆ ಅಪ್ಪಟ ರಂಗನಾಥ ಎಲ್ಲ ಉತ್ಕ್ರಷ್ಠ ದಾನಗಳ ಮಾಡಿರುವೆ ಪಾರಮಾರ್ಥಿಕ ಸತ್ಯ ಅರಿತಿರುವೆ ಅದಕ್ಕೇ ಮಲಗಿರುವೆ ಮುಕ್ತನಂತೆ ಸ್ವರಾಜ್ಯದಲ್ಲಿ ಪ್ರಜೆಯೇ ಪ್ರಭುವಂತೆ ಮೊದಲ ಹಕ್ಕೇ ಮತದಾನವಂತೆ ಆದರೆ ಸಮಯವೆಲ್ಲಿದೆ? ನಾನು ಬುದ್ಧಿವಂತ ಜಡಭರತ ಬರೀ ಮಲಗಿಲ್ಲ ನನ್ನ ಕನಸಲ್ಲಿದೆ ಶ್ರೇಷ್ಠ ಭಾರತ ....,.....ವಿಷಾದದೊಂದಿಗೆ 

ಕರ್ಮ

ಮಾಡಿದ ಪಾಪಗಳು ಸುಡುವಂತೆ ಕಾಡುತಿರಲು ಚಾಮುಂಡಿಗೆ ಹೆದರಿ ಬಾದಾಮಿಗೆ ಓಡಿದರೆ ಬನಶಂಕರಿ ಸುಮ್ಮನೆ ಬಿಡುವಳೇ? ಧರ್ಮ ಭೇಧವ ಬಿತ್ತಿ ಮನಸುಗಳ ಒಡೆದ ನಿಮ್ಮನು ಬಸವಣ್ಣ ಕ್ಷಮಿಸುವನೇ?              ‌